ಶ್ರೀನಿವಾಸ ರಾಮಾನುಜನ್ icon

ಶ್ರೀನಿವಾಸ ರಾಮಾನುಜನ್ APK

  • Author:

    Bharatakhanda

  • Latest Version:

    1.0

  • Publish Date:

    2016-05-13

The description of ಶ್ರೀನಿವಾಸ ರಾಮಾನುಜನ್

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ | ವರ್ಷಂ ತತ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||

ಜೇಬಿನ ತುಂಬ ಹೊಳೆಹೊಳೆಯುವ ವಜ್ರಗಳು; ದಾರಿಯ ಉದ್ದಕ್ಕೂ ಜಗಮಗಿಸುವ ದೀಪಗಳು. ಇಷ್ಟೆಲ್ಲ ಇದ್ದೂ ಕಣ್ಣು ಮುಚ್ಚಿಕೊಂಡು ‘ನಾನು ಬಡವ, ಸುತ್ತ ಕತ್ತಲೆ’ ಎಂದು ಅಳುವವನನ್ನು ಕುರಿತು ನಾವು ಏನೆನ್ನುತ್ತೇವೆ? ಎಂತಹ ದುರದೃಷ್ಟವಂತ ಅವನು, ಅಲ್ಲವೆ? ಭಾರತದಲ್ಲಿ ಹುಟ್ಟಿದ ನಾವು ಎಂತಹ ಭಾಗ್ಯವಂತರು ಎಂದು ತಿಳಿದುಕೊಳ್ಳದೆಹೋದರೆ ನಾವೂ ಅವನಂತೆಯೇ. ಎಷ್ಟು ನದಿಗಳ ಕೃಪೆ, ಎಷ್ಟು ಗಣಿಗಳ ಕೊಡುಗೆ, ಎಷ್ಟು ಗಿರಿವನಗಳ ಸಂಪತ್ತು ನಮ್ಮದು! ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಣ್ಣಿಗೆ ಹಬ್ಬವಾಗಿ, ಹೃದಯವನ್ನು ಸೂರೆಗೊಳ್ಳುವ ಪ್ರಕೃತಿಯ ಚೆಲುವು, ವೈಭವ; ಮನಸ್ಸಿಗೆ ಶಾಂತಿ ನೀಡುವ ಪುಣ್ಯ ಕ್ಷೇತ್ರಗಳು, ಸ್ಫೂರ್ತಿ ನೀಡುವ ವೀರ ನರನಾರಿಯರ ಕರ್ಮಕ್ಷೇತ್ರಗಳು. ಹೆಜ್ಜೆಹೆಜ್ಜೆಗೆ ಬೆಳಕು ಚೆಲ್ಲುವ ಉಜ್ವಲ ದೀಪಗಳಂತೆ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬೆಳಗುವ ಪುಣ್ಯ ಚೇತನರು, ಜ್ಞಾನನಿಧಿಗಳು, ಶೌರ್ಯದ ಮೂರ್ತಿಗಳು, ಹುತಾತ್ಮರು. ಎಲ್ಲ ಭಾರತೀಯರ ಈ ಭಾಗ್ಯವನ್ನು ತಿಳಿಸಿಕೊಡುವ ಪುಸ್ತಕಗಳ ಮಾಲೆಯೇ ‘ಭಾರತ-ಭಾರತಿ ಪುಸ್ತಕ ಸಂಪದ’.

ಕನ್ನಡನಾಡಿನ ಹಲವಾರು ವಿದ್ವಾಂಸರು ನಮ್ಮ ಪ್ರಾರ್ಥನೆಯನ್ನು ಒಪ್ಪಿ, ತಿಳಿಯಾದ ಕನ್ನಡದಲ್ಲಿ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದುಕೊಟ್ಟಿದ್ದಾರೆ. ಕಲಾವಿದರು ಸುಂದರವಾದ ಚಿತ್ರಗಳನ್ನು ಒದಗಿಸಿದ್ದಾರೆ. ಅವರಿಗೆ ನಮ್ಮ ತುಂಬು ಹೃದಯದ ಕೃತಜ್ಞತೆ.ಕನ್ನಡನಾಡಿನ ಮಕ್ಕಳು ಈ ಪುಸ್ತಕಗಳನ್ನು ಓದಿದರೆ ಅವರ ಮತ್ತು ನಮ್ಮ ಶ್ರಮ ಸಾರ್ಥಕ.

ತಮ್ಮ ಮಕ್ಕಳ ಬಾಳು ಹಸಿರಾಗಬೇಕು, ಹೊನ್ನಾಗಬೇಕು ಎಂದು ಪ್ರತಿ ಮನೆಯಲ್ಲಿ ಹಿರಿಯರು ಎಷ್ಟು ಸಾಧನ ಸಂಪತ್ತುಗಳನ್ನು ಒದಗಿಸುತ್ತಾರೆ, ಉಡುಗೊರೆಗಳನ್ನು ಕೊಡುತ್ತಾರೆ! ಅವರಿಗೆ ಅಗತ್ಯವಾಗಿ ಕೊಡಬೇಕಾದುದು ದಾರಿದೀಪಗಳ ಉಡುಗೊರೆ, ಅಲ್ಲವೆ? ಪುಣ್ಯಭೂಮಿ ಭಾರತದ ಮಕ್ಕಳ ಭಾಗ್ಯವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವುದು ನಾವು ತಾಯಿಗೆ ಸಲ್ಲಿಸಬೇಕಾದ ಕರ್ತವ್ಯ, ಮಕ್ಕಳಿಗೆ ಸಲ್ಲಿಸಬೇಕಾದ ಕರ್ತವ್ಯ.
ನಮ್ಮೆಲ್ಲರ ಈ ಕರ್ತವ್ಯಪ್ರಜ್ಞೆಯನ್ನು ನಮ್ಮ ತಾಯಿ ಎಚ್ಚರಿಸಲಿ. ಭಾರತದ ಮಕ್ಕಳಾಗಿ, ಪ್ರಪಂಚದ ಪ್ರಜೆಗಳಾಗಿ ನಾವು ಸಾರ್ಥಕವಾಗಿ ಬಾಳುವಂತಾಗಲಿ. ಇಗೋ ಇಲ್ಲಿದೆ ಭಾರತದ ಕೃಪೆಯ, ನಮ್ಮ ಪುಣ್ಯದ ದರ್ಶನ. ಬನ್ನಿ, ಸ್ವಾಗತ!

ವಂದೇ ಮಾತರಂ.

Show More
Popular Apps In Last 24 Hours
Download
APKPure App